Posts

Showing posts from April, 2019

BREAKING NEWS | ಶಿವಮೊಗ್ಗದಲ್ಲಿ ಮತ್ತೊಮ್ಮೆ ರೌಡಿ ಶೀಟರ್ ಬರ್ಬರ ಹತ್ಯೆ

Image
ಶಿವಮೊಗ್ಗ: ನಗರದಲ್ಲಿ ಮತ್ತೊಮ್ಮೆ ರೌಡಿ ಶೀಟರ್ ಬರ್ಬರ ಹತ್ಯೆ. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಪ್ರವೀನ್(23) ಅನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೋಮಿನಕೊಪ್ಪ ಸಮೀಪದ ಮಧ್ವ ನಗರ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಪ್ರವೀಣನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದುಷ್ಕರ್ಮಿಗಳ ದಾಳಿಗೆ ಒಳಗಾದ ಪ್ರವೀಣ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾಳಿ ಮಾಡಿದವರು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಾರಿನಲ್ಲಿ ಬಂದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ನಗರದ ಆಟೋ ಕಾಂಪ್ಲೆಕ್ಸ್ ನ ಟೀ ಅಂಗಡಿಯಲ್ಲಿ ಮಧು ಎಂಬಾತನ ಹತ್ಯೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾದ ಪ್ರವೀಣ್ ಜೈಲಿಗೂ ಹೋಗಿ ಇತ್ತೀಚೆಗೆ ಜಾಮೀನು ಸಿಕ್ಕಿದ್ದರಿಂದ ಹೊರ ಬಂದಿದ್ದ. ಹಾಗೂ ಪ್ರವೀಣ ಹತ್ಯೆಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಚಿಣ್ಣರೊಂದಿಗೆ ರಂಗಾಯಣ ಬೇಸಿಗೆ ಶಿಬಿರಕ್ಕೆ ಚಾಲನೆ: ಕೆ.ಜಿ.ಕೃಷ್ಣಮೂರ್ತಿ

Image
ಶಿವಮೊಗ್ಗ: ರಂಗಾಯಣದಲ್ಲಿ ಆಯೋಜಿಸಲಾಗಿರುವ ಮಕ್ಕಳ ಬೇಸಿಗೆ ಶಿಬಿರ `ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ’ಕ್ಕೆ ರಂಗ ನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಅವರು ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪೂರಕವಾಗಿದೆ. ಶಿಬಿರಗಳ ಮಕ್ಕಳಲ್ಲಿ ಹೊಸತನವನ್ನು ಉಂಟು ಮಾಡುವಂತಹ ಅವರಲ್ಲಿ ಸೃಜನಶೀಲತೆಯನ್ನು ಬೆಳೆಸುವಂತಹ ಹಾಗೂ ಯೋಚಿಸುವ ಮನೋಭಾವವನ್ನು ಬೆಳೆಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ವೈದ್ಯ ಡಾ.ಕೆ.ಎಸ್.ಗಂಗಾಧರ ಅವರು ಮಾತನಾಡಿ ರಂಗಭೂಮಿ ಸಂಸ್ಕಾರವನ್ನು ಕಲಿಸುತ್ತದೆ. ಕೇವಲ ಮನೋರಂಜನೆ ಮಾತ್ರವಲ್ಲದೆ ಬೋಧನೆ ಮತ್ತು ನಮ್ಮಲ್ಲಿ ಪ್ರಚೋದನೆಯನ್ನು ಸಹ ಉಂಟು ಮಾಡುತ್ತದೆ. ರಂಗಭೂಮಿ ಹೃದಯಕ್ಕೆ ಅತ್ಯಂತ ಆಪ್ತವಾಗಿದ್ದು, ನಮ್ಮಲ್ಲಿ ಸಾಂಸ್ಕೃತಿಕವಾದ ಮನೋಭಾವನೆಯನ್ನು ಮೂಡಿಸುತ್ತದೆ. ಇಂತಹ ಬೇಸಿಗೆ ಶಿಬಿರಗಳು ಕೇವಲ ನಟನೆಯನ್ನು ಮಾತ್ರ ಕಲಿಸುವುದಲ್ಲದೆ ನಮ್ಮ ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು. ಲೇಖಕಿ ಟಿ.ಎಲ್.ರೇಖಾಂಬ ಅವರು ಮಕ್ಕಳಿಗೆ ಕನಸಿನ ಬಗ್ಗೆ ವಿವರಿಸಿ ಚಿಣ್ಣರ ಕುರಿತಾದ ಹಾಡನ್ನು ಹಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ರಂಗಾಯಣ ನಿರ್ದೇಶಕ ಎಂ.ಗಣೇಶ್ ಅವರು ಮಾತನಾಡಿ ಚಿಣ್ಣರ ಬೇಸಿಗೆ ಶಿಬಿರ ಎಪ್ರಿಲ್ 30ರವರೆಗೆ ನಡೆಯಲಿದ್ದು, 250 ಮಕ್ಕಳು ಭಾಗವಹಿಸುತ್ತಿದ್ದಾರೆ. ಮ...

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆ

Image
ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಶ್ರೀ ಹರ್ಷ ಟ್ರೇಡರ್ಸ್, ದಿನಸಿ ಖರೀದಿಗಾರರು, ರವೀಂದ್ರನಗರ, ಶಿವಮೊಗ್ಗ ಇವರು 2008-18 ನೇ ಸಾಲಿನ 10 ವರ್ಷಗಳ ಅವಧಿಗೆ ಖರೀದಿ, ಆಮದು, ರಫ್ತು ಮತ್ತು ದಾಸ್ತಾನುದಾರರ ಲೈಸೆನ್ಸ್ ಪಡೆದುಕೊಂಡಿದ್ದು, ಅವಧಿ ಮುಗಿದ ಕಾರಣ ಲೈಸೆನ್ಸ್ ರದ್ದು ಪಡಿಸಲು ಕೋರಿರುತ್ತಾರೆ. ಈ ಬಗ್ಗೆ ರೈತರು/ವರ್ತಕ/ದಲ್ಲಾಳಿಗಳಿಗೆ ಬರಬೇಕಾದ ಬಾಕಿಗಳು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿನದೊಳಗಾಗಿ ಕಾರ್ಯದರ್ಶಿಗಳು, ಕೃಷಿ ಉತ್ತಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ ಇವರಿಗೆ ಲಿಖಿತ ಆಕ್ಷೆÃಪಣೆ ಸಲ್ಲಿಸುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

Image
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್‌ನಿಂದ ನೀಡಲಾಗುವ ವಿವಿಧ ಧತ್ತಿನಿಧಿ ಪ್ರಶಸ್ತಿಗಳಿಗೆ ಕೃತಿಗಳನ್ನ ಆಹ್ವಾನಿಸಲಾಗಿದ್ದು, ಸ್ಪರ್ದಿಗಳು ಪ್ರತಿ ಸ್ಪರ್ದೆಗೂ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು 560018 ಇಲ್ಲಿಗೆ ಮೇ 15ರೊಳಗಾಗಿ ತಲುಪುವಂತೆ ಕಳಿಸಿಕೊಡಲು ಸೂಚಿಸಲಾಗಿದೆ.  ಭಾಗವಹಿಸುವ ಲೇಖಕರು ಸ್ಪರ್ದೆಯ ದತ್ತಿ ಹೆಸರು, ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಲಾಗಿದೆ. ವಿವಿಧ ಸ್ಪರ್ದೆಗಳ ಹೆಸರು ಹಾಗೂ ಹೆಚ್ಚಿನ ವಿವರಗಳಿಗೆ ಸ್ವ ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆ ಇಟ್ಟು ಪತ್ರ ಬರೆಯಬಹುದು ಅಥವಾ  www.kasapa.in ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏ. 14 ರಂದು ಡಾ|| ಬಿ.ಆರ್.ಅಂಬೇಡ್ಕರ್‌ರವರ 128ನೇ ಜನ್ಮದಿನಾಚರಣೆ: ಜಿಲ್ಲಾಡಳಿತ

Image
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏ. 14 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಭಾರತದ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್‌ರವರ 128ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಉದ್ಘಾಟಿಸುವರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಶಿವರಾಮೇಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ರಕ್ಷಣಾಧಿಕಾರಿ ಡಾ|| ಎಂ. ಅಶ್ವಿನಿ,  ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅತಿಥಿಗಳಾಗಿ ಉಪಸ್ಥಿತರಿರುವರು. ಜಿಲ್ಲೆಯ ದಲಿತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಈ ಸಮಾರಂಭದಲ್ಲಿ ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ|| ಕೆ. ಶಿವಾಜಿರಾವ್ ಘೋರ್ಪಡೆ   ಅಂಬೇಡ್ಕರ್‌ರವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡುವರು.  ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ದಯಾನಂದ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೆಚ್.ವಿ...

ಮತದಾನ ಪವಿತ್ರವಾದ ಕೆಲಸ: ಜಿಲ್ಲಾಧಿಕಾರಿ ಕೆ.ಎ.ದಯಾನಂದ್

Image
ಶಿವಮೊಗ್ಗ: ಉತ್ತಮ ಪ್ರಜಾಪ್ರಭುತ್ವ ನಿರ್ಮಾಣ ಮಾಡಲು ನಾವು ನೀವೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಪವಿತ್ರವಾದ ಕೆಲಸ. ಮನುಷ್ಯನ ಜೀವಿತಾವಧಿಯಲ್ಲಿ ಕೇವಲ 5 ಬಾರಿ ಮಾತ್ರ ಮಹಾಸಭೆಗಳಲ್ಲಿ ಮತದಾನ ಮಾಡಲು ಅವಕಾಶವಿರುತ್ತದೆ. 5 ಬಾರಿ ಮತದಾನ ಮಾಡಲು ಕೇವಲ 5 ಗಂಟೆಗಳು ಮಾತ್ರ ಸಾಕು. ಹಾಗಾಗಿ ಪ್ರತಿನಿತ್ಯ ನಮ್ಮ ಜೀವಿತಾವಧಿಯಲ್ಲಿ ಸಾಕಷ್ಟು, ಬೇಕು-ಬೇಡಾದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿರುತೇವೆ. ಒಳ್ಳೆಯ ಪ್ರಜಾಪ್ರಭುತ್ವದ ಸರ್ಕಾರ ನಿರ್ಮಾಣ ಮಾಡಲು ಎಲ್ಲರೂ ತಪ್ಪದೇ ಮತದಾನಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್‌ರವರು ನುಡಿದರು.        ಅವರು ರೋಟರಿ ಕ್ಲಬ್ ರಿವರ್‌ಸೈಡ್ ವತಿಯಿಂದ ಹಾಗೂ ಶಿವಮೊಗ್ಗ ನಗರದ ಎಲ್ಲಾ 7 ರೋಟರಿ ಕ್ಲಬ್‌ಗಳು ಹಾಗೂ ವಿವಿಧ ಸಂಘಟನೆಗಳ ಮುಖಾಂತರ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಮೊಗ್ಗ ಜಿಲ್ಲೆ ಹಲವು ಪ್ರಥಮಗಳಿಗೆ ಹೆಸರಾಗಿದೆ. ಸಾಕಷ್ಟು ಸಾಧನೆ ಮಾಡಿ ಅತ್ಯಂತ ಪ್ರತಿಭಾವಂತರಿರುವ ಜಿಲ್ಲೆಯು ಈ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಹಾಗೂ ಹೊಸ ಮತದಾರರು ತಪ್ಪದೇ, ಮತಗಟ್ಟೆಗೆ ಬಂದು ಮತ ಚಲಾಯಿಸಿ ಬೇರೆಯವರನ್ನು ಮತ ಹಾಕಲು ಪ್ರೇರೆಪಿಸಬೇಕು ಹಾಗೂ ಶಿವಮೊಗ್ಗ ನಗರವನ್ನು ಮತದಾನದಲ್ಲಿ ನಂ. 1 ಮಾಡಬೇಕು. ಮತ್ತು ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರು ಜಾಗೃತಿ ಮೂಡಿಸ...

ಬೇಸಿಗೆ ಶಿಬಿರಗಳು ಮಕ್ಕಳಿಗೆ ಜೀವಂತಿಕೆ ನೀಡಬೇಕು: ಆರುಂಡಿ ಶ್ರೀನಿವಾಸ್ ಮೂರ್ತಿ

Image
ಶಿವಮೊಗ್ಗ: ಬೇಸಿಗೆ ಶಿಬಿರಗಳು ಮಕ್ಕಳಿಗೆ ಜೀವಂತಿಕೆ ನೀಡಬೇಕು ಎಂದು ಪತ್ರಕರ್ತ ಆರುಂಡಿ ಶ್ರೀನಿವಾಸ್ ಮೂರ್ತಿ ಹೇಳಿದರು. ಅವರು ಕಲ್ಲಹಳ್ಳಿಯ ರಾಯಲ್ ಡೈಮಂಡ್ ಶಾಲೆಯಲ್ಲಿ ಇಂದಿರಾ ಪ್ರಕಾಶ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅಜ್ಜಿ ಮನೆ ಬೇಸಿಗೆ ಶಿಬಿರ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ಶಿಬಿರಗಳಿ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳ ತೊಡಗಿದೆ. ಬದುಕು ಬದಲಾದಂತೆ ಸಾಮಾಜಿಕ ಜೀವನ ಕೂಡ ಬದಲಾಗಿದೆ. ಅಜ್ಜಿ ಮನೆ ಸ್ವರೂಪವೇ ಇಲ್ಲವಾಗಿದೆ. ನಗರದ ಮಕ್ಕಳು ಹಳ್ಳಿಯತ್ತ ಹೋಗಲು ಬಯಸುವುದಿಲ್ಲ. ಬಯಸಿದರೂ ಪೋಷಕರು ಮಕ್ಕಳ ಬಾಲ್ಯವನ್ನು ಕಟ್ಟಿ ಹಾಕುವ ಪ್ರಯತ್ನ ಪಡುತ್ತಿದ್ದಾರೆ. ಈಗಾಗಿ ಬೇಸಿಗೆ ಶಿಬಿರಗಳು ತೀರ ಅನಿವಾರ್ಯವಾಗಿದೆ ಎಂದರು. ಆದರೆ ಬೇಸಿಗೆ ಶಿಬಿರಗಳು ಕೇವಲ ಹಣ ಮಾಡುವ ದಂಧೆಯಾಗಬಾರದು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ವಿವಿಧ ಕಲೆಗಳ ಪ್ರೊತ್ಸಹಿಸುವುದು. ಮಕ್ಕಳಲ್ಲಿ ಜಾತಿ, ಧರ್ಮ, ರೂಪ, ದ್ವೇಷಗಳಿಂದ ಆಚೆ ತಂದು ಎಲ್ಲರೂ ಒಂದೇ ಎಂಬ ಸಾಮರಸ್ಯ ಬೆಳೆಸುವ ಅಗತ್ಯವಿದೆ. ಪಠ್ಯ ಪುಸ್ತಕಗಳಿಗೆ ಇಲ್ಲಿ ಜಾಗವಿಲ್ಲ ಎಂದರು. ಅಜ್ಜಿ ಮನೆ ಶಿಬಿರದ ಮಕ್ಕಳ ಪೋಷಕರ ಪರವಾಗಿ ಮಾತನಾಡಿದ ವಕೀಲೆ ಸರೋಜಾ ಚೆಂಗುಳಿ, ಅಜ್ಜಿ ಮನೆಯ ನೆನಪುಗಳು ಈಗಾಗಲೇ ಮರೆಯಾಗಿವೆ. ಅಜ್ಜಿಯರೇ ಇಲ್ಲದ ಕಾಲವಿದು. ಬದಲಾಗದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಇತಂಹ ಶಿಬ...

ಕರಪತ್ರ, ಪೋಸ್ಟರ್ ಮುದ್ರಕರಿಗೆ ಸೂಚನೆ: ಚಾರುಲತಾ ಸೋಮಲ್

Image
ಶಿವಮೊಗ್ಗ: ಏಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಕಾಶಕರು, ಫ್ಲೆಕ್ಸ್ ಹಾಗೂ ಮುದ್ರಣಾಲಯ ಮಾಲೀಕರು ಮುದ್ರಿಸುವ ಯಾವುದೇ ರಾಜಕೀಯ ಪಕ್ಷದ ಕರಪತ್ರ, ಪೋಸ್ಟರ್ ಮತ್ತು ಇತರೆ ದಾಖಲಾತಿಗಳನ್ನು ಚುನಾವಣಾ ಆಯೋಗದ ನಿಯವi ಪಾಲಿಸಿ ಪ್ರಕಟಿಸುವಂತೆ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷ, ವ್ಯಕ್ತಿಗಳ ಕರಪತ್ರ ಮತ್ತು ಪೋಸ್ಟರ್‌ಗಳನ್ನು ಮುದ್ರಿಸುವಾಗ ಮುದ್ರಣಾಲಯ, ಪ್ರಕಾಶಕರ ಹೆಸರು, ವಿಳಾಸ ಮತ್ತು ಮುದ್ರಿತ ಪ್ರತಿಗಳ ಒಟ್ಟು ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ವ್ಯಕ್ತಿಯು ತನ್ನ ಅಥವಾ ರಾಜಕೀಯ ಪಕ್ಷದ ಕರಪತ್ರ, ಪೋಸ್ಟರ್ ಮುದ್ರಿಸಲು ತಂದಾಗ ಸದರಿ ವ್ಯಕ್ತಿಯ ದಾಖಲೆ ಹಾಗೂ ಸದರಿ ವ್ಯಕ್ತಿಗೆ ವೈಯಕ್ತಿಕವಾಗಿ ಪರಿಚಯವಿರುವ ಇಬ್ಬರು ಸಾಕ್ಷಿಯೊಂದಿಗೆ ಚುನಾವಣಾ ಆಯೋಗದಿಂದ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಸದರಿ ವ್ಯಕ್ತಿಯ ಘೋಷಣಾಪತ್ರವನ್ನು ಪಡೆದು ನಂತರ ಕರಪತ್ರ, ಪೋಸ್ಟರ್ ಮುದ್ರಿಸಲು ಕ್ರಮವಹಿಸುವುದು. ಮುದ್ರಣವಾದ 3 ದಿನಗಳೊಳಗೆ ಸದರಿ ಕರಪತ್ರ, ಪೋಸ್ಟರ್‌ಗಳ 4 ಪ್ರತಿಗಳನ್ನು ಹಾಗೂ ವ್ಯಕ್ತಿಯು ನೀಡಿದ ಘೋಷಣಾಪತ್ರವನ್ನು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕ...

ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ: ಸಮಾಜ ಕಲ್ಯಾಣ ಇಲಾಖೆ

Image
ಶಿವಮೊಗ್ಗ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2019-20ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಗುರುತಿಸಲಾಗಿರುವ ಪ್ರತಿಷ್ಠಿತ ಶಾಲೆಗಳಿಗೆ 5ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕಪಡೆದು ಉತ್ತೀರ್ಣರಾಗಿರುವ ಪ್ರತಿಭಾವಂತ ಪರಿಶಿಷ್ಟ ವರ್ಗದ 18 ಸ್ಥಾನಗಳಿಗೆ 6ನೇ ತರಗತಿಗೆ ಅರ್ಹತಾ ಪರೀಕ್ಷೆ ಮೂಲಕ ದಾಖಲಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಏಪ್ರಿಲ್ 11ರಿಂದ 30ರವರೆಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಗಧಿತ ನಮೂನೆಯ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಶಿವಮೊಗ್ಗ ಹಾಗೂ ಎಲ್ಲಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ 08182-279222ನ್ನು ಸಂಪರ್ಕಿಸಬಹುದಾಗಿದೆ.

ಚುನಾವಣಾ ನೀತಿಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ: ಆಯುಕ್ತೆ ಚಾರುಲತಾ ಸೋಮಲ್

Image
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿವಮೊಗ್ಗ ವಿಧಾನಸಭಾ  ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಎಲ್ಲಾ ಪಕ್ಷದ ರಾಜಕೀಯ ವ್ಯಕ್ತಿಗಳು ಜಾತಿ, ಧರ್ಮ, ವರ್ಣದ ಆಧಾರದ ಮೇಲೆ ಮತಯಾಚನೆ ಮಾಡುವುದು, ವೈಯಕ್ತಿಕವಾಗಿ ನಿಂದಿಸುವುದು, ಯಾರೇ ವ್ಯಕ್ತಿಗಳು ಅಥವಾ ನಿಯೋಜಿತ ತಂಡಗಳು ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿ, ಚರ್ಚ್ ಇವುಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗೆ ಒಳಪಡುವುದರಿಂದ ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಅಧಿಕಾರಿಗಳ ಗಮನಕ್ಕೆ ಬಂದರೆ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ. ಈವರೆಗೆ ಶಿವಮೊಗ್ಗ ವಿಧಾನಸಭಾ  ಕ್ಷೇತ್ರದ ವ್ಯಾಪ್ತಿಯಲ್ಲಿ ಸುವಿಧಾ ಅಡಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ 39ಕರ‍್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ರಾಜಕೀಯೇತರವಾಗಿರು ವ ಧಾರ್ಮಿಕ, ಮದುವೆ ಹಾಗೂ ಇತರೆ ರಾಜಕೀಯೇತರವಾದ 184 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಈವರೆಗೆ ಸಿ-ವಿಜಲ್‌ನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ 22ದೂರುಗಳು ದಾಖಲಾಗಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ 10 ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ

Image
ಶಿವಮೊಗ್ಗ: ಶಿವಮೊಗ್ಗ ರಂಗಾಯಣ ಘಟಕವು ಏಪ್ರಿಲ್ 12ರಿಂದ 30ರವರೆಗೆ ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ ಎಂಬ ಶಿರೋನಾಮೆಯಡಿಯಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ವಿಶೇಷ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ. ಈ ಶಿಬಿರವನ್ನು ಕಿನ್ನರ ಮೇಳದ ಸಂಸ್ಥಾಪಕರು ಹಾಗೂ ರಂಗನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಅವರು ಉದ್ಘಾಟಿಸುವರು. ಮೆಗ್ಗಾನ್ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ.ಕೆ.ಎಸ್.ಗಂಗಾಧರ್, ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟ ವಿರೋಧಿ ಒಕ್ಕೂಟದ ಸದಸ್ಯೆ ಶ್ರೀಮತಿ ಟಿ.ಎಲ್.ರೇಖಾಂಬ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ, ರಂಗನಟ ಚಂದ್ರು ತಿಪಟೂರು ಮುಂತಾದವರು ಉಪಸ್ಥಿತರಿರುವರು. ಎಂದು ಶಿವಮೊಗ್ಗ ರಂಗಾಯಣ ಘಟಕದ ಆಡಳಿತಾಧಿಕಾರಿ ಶಫೀ ಸಾದುದ್ದೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

Image
ಶಿವಮೊಗ್ಗ : ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏ.13 ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಐ.ಐ.ಎಫ್.ಎಲ್. ಗೋಲ್ಡ್ಲೋನ್ ಮೊದಲನೇ ಮಹಡಿ, ಏಜಂಲ್ಸ್ ಬಟ್ಟೆ ಅಂಗಡಿ, ಎಸ್.ಎಲ್.ವಿ. ಬೇಕರಿ ಎದುರು, ದುರ್ಗಿಗುಡಿ ಮುಖ್ಯರಸ್ತೆ. ವಿವರಕ್ಕೆ ಮೊ : 7337783303, 8296045740, 8217665605 ಗೆ ಸಂಪರ್ಕಿಸಿ.

ಮೆಸ್ಕಾಂ ಜನಸಂಪರ್ಕ ಸಭೆ

Image
ಶಿವಮೊಗ್ಗ: ಏ.12ರ ಬೆಳಗ್ಗೆ 10:30ರಿಂದ 12ರ ವರೆಗೆ ನಗರದ ಉಪ ವಿಭಾಗ-2 ಕೃಷಿ ಕಟ್ಟಡ, ಓ.ಟಿ ರಸ್ತೆ. ಘಟಕ-4, ಕೆ.ಆರ್ ಪುರಂ ಸರ್ಕಾರಿ ಶಾಲೆ ಹತ್ತಿರ. ಘಟಕ-5 ಭಾರತೀಯ ಸಭಾ ಭವನ ಆರ್ ಎಂ ಎಲ್ ನಗರ. ಘಟಕ-6, 100 ಅಡಿ ರಸ್ತೆ, ಹೊಸ ಮಂಡ್ಲಿ.  ಈ ಸ್ಥಳಗಳ ಮೆಸ್ಕಾಂ ಕಛೇರಿಗಳಲ್ಲಿ ಜನ ಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ಸ್ಪೈರ್ ಅವಾರ್ಡ್ ಯೋಜನೆಯಡಿ ಹೆಸರು ನೊಂದಾಯಿಸುವಂತೆ ಸೂಚನೆ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

Image
ಶಿವಮೊಗ್ಗ: ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 6 ರಿಂದ 10ನೇ ತರಗತಿ ಶಿಕ್ಷಣ ಪಡೆಯುತ್ತಿರುವ 10 ರಿಂದ 15 ವರ್ಷ ವಯಸ್ಸಿನ ಅರ್ಹ ವಿದ್ಯಾರ್ಥಿಗಳನ್ನು ಈ-ಮ್ಯಾನೇಜ್ಮೆಂಟ್ ಆಫ್ ಇನ್ಸ್ಪೈರ್ ಅವಾರ್ಡ್ ಯೋಜನೆಯಡಿ ಹೆಸರು ನೊಂದಾಯಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮಾನ್ಯತೆ ಪಡೆದ ನೋಂದಣಿಯಾಗದ ಶಾಲೆಗಳನ್ನು ನೊಂದಾಯಿಸಿಕೊಂಡು ಪ್ರತಿ ಶಾಲೆಗಳಿಂದ ಎರಡರಿಂದ ಮೂರು ವಿದ್ಯಾರ್ಥಿಗಳ ಹೆಸರನ್ನು ಸೂಚಿಸಿ ನೋಂದಾಯಿಸಲು ಸೂಚಿಸಲಾಗಿದೆ. ಕಡ್ಡಾಯವಾಗಿ ನೋಂದಾಯಿಸುವಾಗ ವಿದ್ಯಾರ್ಥಿಗಳ ಪ್ರಾಜೆಕ್ಟ್ನ್ನು ಸಿನಾಪ್ಸೆಸ್ ವರ್ಡ್ ಪಿಡಿಎಫ್‌ನಲ್ಲಿ ಅಪ್‌ಲೋಡ್ ಮಾಡುವಂತೆ ತಿಳಿಸಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸಲು ವೆಬ್ ವಿಳಾಸ  www.inspireaward.dst.gov.in.   ನ್ನು ಸಂಪರ್ಕಿಸುವಂತೆ ಡಯಟ್ ಪ್ರಾಂಶುಪಾಲರು ತಿಳಿಸಿರುತ್ತಾರೆ.

ಮಾಂಸ ಮಾರಾಟ ನಿಷೇಧ : ಚಾರುಲತಾ ಸೋಮಲ್

Image
ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆಯು ಏ. 13  ಶ್ರೀರಾಮ  ನವಮಿ, ಏ. 14  ಡಾ|| ಅಂಬೇಡ್ಕರ್ ಜಯಂತಿ ಮತ್ತು ಏ. 17 ರಂದು ನಡೆಯಲಿರುವ ಮಹಾವೀರ ಜಯಂತಿಯ ಅಂಗವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನಿಗಧಿತ ದಿನಾಂಕಗಳಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಮಹಾನಗರಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಾಂಸ ಮಾರಾಟದ ಮಾಲೀಕರು ನಿಗಧಿತ ದಿನಾಂಕಗಳಂದು  ತಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಆದೇಶವನ್ನು ಉಲ್ಲಂಘಿಸಿ, ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾರರು ದಾಖಲೆಗಳನ್ನು ಹೊಂದಿರಲು ಸೂಚನೆ : ಚಾರುಲತಾ ಸೋಮಲ್

Image
| ಶಿವಮೊಗ್ಗ ನ್ಯೂಸ್ | 10 ಏಪ್ರಿಲ್ 2019 | ಶಿವಮೊಗ್ಗ: 23  ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹ ಮತದಾರರು ಜಿಲ್ಲಾ ಚುನಾವಣಾ ಶಾಖೆಯಿಂದ ನೀಡಲಾದ ಮತದಾರರ ಗುರುತಿನ ಚೀಟಿಯಲ್ಲದೇ ಇತರೆ 11 ಬಗೆಯ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ ಎಂದು ಮಹಾನಗರಪಾಲಿಕೆಯ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರಿಗೆ ಗುರುತಿನ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ವಿತರಿಸಲಿದ್ದಾರೆ. ಈ ಮತದಾರರ ಗುರುತಿನ ಚೀಟಿಯು ಮತದಾರರಿಗೆ ತಮ್ಮ ಮತದಾನ ಕೇಂದ್ರದ ಹೆಸರು ಮತ್ತು ಮತದಾರನ ಹೆಸರು ಮತದಾರರ ಪಟ್ಟಿಯ ಯಾವ ಕ್ರಮ ಸಂಖ್ಯೆಯಲ್ಲಿ ನಮೂದಿಸಿದೆ ಎಂಬ ಮಾಹಿತಿಯನ್ನು ತಿಳಿಯುವ ಉದ್ದೇಶಕ್ಕಾಗಿ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ. ಈ ಮತದಾರರ ಗುರುತಿನ ಚೀಟಿಯು ಮತದಾನ ಮಾಡುವುದಕ್ಕೆ ದಾಖಲಾತಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿರುವ ಅವರು, ಪ್ರಸಕ್ತ ಚುನಾವಣೆಯಲ್ಲಿ ಮತದಾರರ ಗುರುತಿನ ಹೊಂದಿರುವವರು ಮತ ಚಲಾಯಿಸುವಂತೆ ಗುರುತಿನ ಚೀಟಿ ಹೊಂದಿರದ ಮತದಾರರು ಚುನಾವಣಾ ಆಯೋಗವು ಸೂಚಿಸಿರುವ ಸಾಕ್ಷ್ಯಗಳನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ. ಅವುಗಳಲ್ಲಿ ಮುಖ್ಯವಾಗಿ ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಿಗ...