ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ
ಶಿವಮೊಗ್ಗ: ಶಿವಮೊಗ್ಗ ರಂಗಾಯಣ ಘಟಕವು ಏಪ್ರಿಲ್ 12ರಿಂದ 30ರವರೆಗೆ ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ ಎಂಬ ಶಿರೋನಾಮೆಯಡಿಯಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ವಿಶೇಷ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ.
ಈ ಶಿಬಿರವನ್ನು ಕಿನ್ನರ ಮೇಳದ ಸಂಸ್ಥಾಪಕರು ಹಾಗೂ ರಂಗನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಅವರು ಉದ್ಘಾಟಿಸುವರು. ಮೆಗ್ಗಾನ್ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ.ಕೆ.ಎಸ್.ಗಂಗಾಧರ್, ರಾಜ್ಯ ಮಹಿಳಾ ದೌರ್ಜನ್ಯ ಒಕ್ಕೂಟ ವಿರೋಧಿ ಒಕ್ಕೂಟದ ಸದಸ್ಯೆ ಶ್ರೀಮತಿ ಟಿ.ಎಲ್.ರೇಖಾಂಬ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ, ರಂಗನಟ ಚಂದ್ರು ತಿಪಟೂರು ಮುಂತಾದವರು ಉಪಸ್ಥಿತರಿರುವರು. ಎಂದು ಶಿವಮೊಗ್ಗ ರಂಗಾಯಣ ಘಟಕದ ಆಡಳಿತಾಧಿಕಾರಿ ಶಫೀ ಸಾದುದ್ದೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment