ಇನ್ಸ್ಪೈರ್ ಅವಾರ್ಡ್ ಯೋಜನೆಯಡಿ ಹೆಸರು ನೊಂದಾಯಿಸುವಂತೆ ಸೂಚನೆ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಶಿವಮೊಗ್ಗ: ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 6 ರಿಂದ 10ನೇ ತರಗತಿ ಶಿಕ್ಷಣ ಪಡೆಯುತ್ತಿರುವ 10 ರಿಂದ 15 ವರ್ಷ ವಯಸ್ಸಿನ ಅರ್ಹ ವಿದ್ಯಾರ್ಥಿಗಳನ್ನು ಈ-ಮ್ಯಾನೇಜ್ಮೆಂಟ್ ಆಫ್ ಇನ್ಸ್ಪೈರ್ ಅವಾರ್ಡ್ ಯೋಜನೆಯಡಿ ಹೆಸರು ನೊಂದಾಯಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನ್ಯತೆ ಪಡೆದ ನೋಂದಣಿಯಾಗದ ಶಾಲೆಗಳನ್ನು ನೊಂದಾಯಿಸಿಕೊಂಡು ಪ್ರತಿ ಶಾಲೆಗಳಿಂದ ಎರಡರಿಂದ ಮೂರು ವಿದ್ಯಾರ್ಥಿಗಳ ಹೆಸರನ್ನು ಸೂಚಿಸಿ ನೋಂದಾಯಿಸಲು ಸೂಚಿಸಲಾಗಿದೆ. ಕಡ್ಡಾಯವಾಗಿ ನೋಂದಾಯಿಸುವಾಗ ವಿದ್ಯಾರ್ಥಿಗಳ ಪ್ರಾಜೆಕ್ಟ್ನ್ನು ಸಿನಾಪ್ಸೆಸ್ ವರ್ಡ್ ಪಿಡಿಎಫ್‌ನಲ್ಲಿ ಅಪ್‌ಲೋಡ್ ಮಾಡುವಂತೆ ತಿಳಿಸಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸಲು ವೆಬ್ ವಿಳಾಸ www.inspireaward.dst.gov.in. ನ್ನು ಸಂಪರ್ಕಿಸುವಂತೆ ಡಯಟ್ ಪ್ರಾಂಶುಪಾಲರು ತಿಳಿಸಿರುತ್ತಾರೆ.
Comments
Post a Comment