ಮತದಾನ ಪವಿತ್ರವಾದ ಕೆಲಸ: ಜಿಲ್ಲಾಧಿಕಾರಿ ಕೆ.ಎ.ದಯಾನಂದ್

ಶಿವಮೊಗ್ಗ: ಉತ್ತಮ ಪ್ರಜಾಪ್ರಭುತ್ವ ನಿರ್ಮಾಣ ಮಾಡಲು ನಾವು ನೀವೆಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಪವಿತ್ರವಾದ ಕೆಲಸ. ಮನುಷ್ಯನ ಜೀವಿತಾವಧಿಯಲ್ಲಿ ಕೇವಲ 5 ಬಾರಿ ಮಾತ್ರ ಮಹಾಸಭೆಗಳಲ್ಲಿ ಮತದಾನ ಮಾಡಲು ಅವಕಾಶವಿರುತ್ತದೆ. 5 ಬಾರಿ ಮತದಾನ ಮಾಡಲು ಕೇವಲ 5 ಗಂಟೆಗಳು ಮಾತ್ರ ಸಾಕು. ಹಾಗಾಗಿ ಪ್ರತಿನಿತ್ಯ ನಮ್ಮ ಜೀವಿತಾವಧಿಯಲ್ಲಿ ಸಾಕಷ್ಟು, ಬೇಕು-ಬೇಡಾದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿರುತೇವೆ. ಒಳ್ಳೆಯ ಪ್ರಜಾಪ್ರಭುತ್ವದ ಸರ್ಕಾರ ನಿರ್ಮಾಣ ಮಾಡಲು ಎಲ್ಲರೂ ತಪ್ಪದೇ ಮತದಾನಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್‌ರವರು ನುಡಿದರು. 
      ಅವರು ರೋಟರಿ ಕ್ಲಬ್ ರಿವರ್‌ಸೈಡ್ ವತಿಯಿಂದ ಹಾಗೂ ಶಿವಮೊಗ್ಗ ನಗರದ ಎಲ್ಲಾ 7 ರೋಟರಿ ಕ್ಲಬ್‌ಗಳು ಹಾಗೂ ವಿವಿಧ ಸಂಘಟನೆಗಳ ಮುಖಾಂತರ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿವಮೊಗ್ಗ ಜಿಲ್ಲೆ ಹಲವು ಪ್ರಥಮಗಳಿಗೆ ಹೆಸರಾಗಿದೆ. ಸಾಕಷ್ಟು ಸಾಧನೆ ಮಾಡಿ ಅತ್ಯಂತ ಪ್ರತಿಭಾವಂತರಿರುವ ಜಿಲ್ಲೆಯು ಈ ನಿಟ್ಟಿನಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಹಾಗೂ ಹೊಸ ಮತದಾರರು ತಪ್ಪದೇ, ಮತಗಟ್ಟೆಗೆ ಬಂದು ಮತ ಚಲಾಯಿಸಿ ಬೇರೆಯವರನ್ನು ಮತ ಹಾಕಲು ಪ್ರೇರೆಪಿಸಬೇಕು ಹಾಗೂ ಶಿವಮೊಗ್ಗ ನಗರವನ್ನು ಮತದಾನದಲ್ಲಿ ನಂ. 1 ಮಾಡಬೇಕು. ಮತ್ತು ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರು ಜಾಗೃತಿ ಮೂಡಿಸಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಪ್ರಯತ್ನ ಮಹಿಳಾ ತಂಡದವರು ಮತದಾನದ ಬಗ್ಗೆ ಬೀದಿ ನಾಟಕ ಮಾಡಿ ಎಲ್ಲರ ಮನಸ್ಸನ್ನು ಆಕರ್ಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗರ‍್ನರ್ ಅಭಿನಂದನ್ ಶೆಟ್ಟಿ, ರವೀಂದ್ರನಾಥ್ ಐತಾಳ್, ಜಿ.ವಿಜಯಕುಮಾರ್, ಕೆ.ಪಿ.ಶೆಟ್ಟಿ, ಕಾರ್ಯದರ್ಶಿ ರಾಜೇಶ್, ಧನರಾಜ್, ರಾಜಣ್ಣ, ಸುನಿತ ಶ್ರೀಧರ್, ರಾಜಶೇಖರ್, ಆನಂದಮೂರ್ತಿ ಹಾಗೂ ಶಿವಮೊಗ್ಗ ನಗರದ ಎಲ್ಲಾ ರೋಟರಿ ಕ್ಲಬ್‌ಗಳ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ