ಬೇಸಿಗೆ ಶಿಬಿರಗಳು ಮಕ್ಕಳಿಗೆ ಜೀವಂತಿಕೆ ನೀಡಬೇಕು: ಆರುಂಡಿ ಶ್ರೀನಿವಾಸ್ ಮೂರ್ತಿ

ಬೇಸಿಗೆ ಶಿಬಿರಗಳಿ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳ ತೊಡಗಿದೆ. ಬದುಕು ಬದಲಾದಂತೆ ಸಾಮಾಜಿಕ ಜೀವನ ಕೂಡ ಬದಲಾಗಿದೆ. ಅಜ್ಜಿ ಮನೆ ಸ್ವರೂಪವೇ ಇಲ್ಲವಾಗಿದೆ. ನಗರದ ಮಕ್ಕಳು ಹಳ್ಳಿಯತ್ತ ಹೋಗಲು ಬಯಸುವುದಿಲ್ಲ. ಬಯಸಿದರೂ ಪೋಷಕರು ಮಕ್ಕಳ ಬಾಲ್ಯವನ್ನು ಕಟ್ಟಿ ಹಾಕುವ ಪ್ರಯತ್ನ ಪಡುತ್ತಿದ್ದಾರೆ. ಈಗಾಗಿ ಬೇಸಿಗೆ ಶಿಬಿರಗಳು ತೀರ ಅನಿವಾರ್ಯವಾಗಿದೆ ಎಂದರು.
ಆದರೆ ಬೇಸಿಗೆ ಶಿಬಿರಗಳು ಕೇವಲ ಹಣ ಮಾಡುವ ದಂಧೆಯಾಗಬಾರದು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ವಿವಿಧ ಕಲೆಗಳ ಪ್ರೊತ್ಸಹಿಸುವುದು. ಮಕ್ಕಳಲ್ಲಿ ಜಾತಿ, ಧರ್ಮ, ರೂಪ, ದ್ವೇಷಗಳಿಂದ ಆಚೆ ತಂದು ಎಲ್ಲರೂ ಒಂದೇ ಎಂಬ ಸಾಮರಸ್ಯ ಬೆಳೆಸುವ ಅಗತ್ಯವಿದೆ. ಪಠ್ಯ ಪುಸ್ತಕಗಳಿಗೆ ಇಲ್ಲಿ ಜಾಗವಿಲ್ಲ ಎಂದರು.
ಅಜ್ಜಿ ಮನೆ ಶಿಬಿರದ ಮಕ್ಕಳ ಪೋಷಕರ ಪರವಾಗಿ ಮಾತನಾಡಿದ ವಕೀಲೆ ಸರೋಜಾ ಚೆಂಗುಳಿ, ಅಜ್ಜಿ ಮನೆಯ ನೆನಪುಗಳು ಈಗಾಗಲೇ ಮರೆಯಾಗಿವೆ. ಅಜ್ಜಿಯರೇ ಇಲ್ಲದ ಕಾಲವಿದು. ಬದಲಾಗದ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಇತಂಹ ಶಿಬಿರಗಳಿಂದ ಮಕ್ಕಳಿಗೆ ಮತ್ತೆ ಹಳ್ಳಿ ಬದುಕು, ಹಳ್ಳಿಯ ಆಟಗಳು ಕುಟುಂಬದ ಪರಿಕಲ್ಪನೆ ಇವೆಲ್ಲಾ ಮರು ಸೃಷ್ಠಿಯಾಗುತ್ತದೆ ಎಂಬ ಕಾರಣಕ್ಕಾಗಿ ನಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುತ್ತಿದೆ. ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಪ್ರತಿಭೆಗಳ ಅನಾವರಣಗೊಳಿಸುವುದರ ಜೊತೆಗೆ ಅರಿವನ್ನು ಮೂಡಿಸಲಿ ಎಂದರು.
ಕಾರ್ಯಕ್ರಮದಲ್ಲಿ ಇಂದಿರಾ ಪ್ರಕಾಶ್ ಅಕಾಡೆಮಿ ಮುಖ್ಯಸ್ಥೆ ಇಂದಿರಾ ಪ್ರಕಾಶ್, ಸಂಪನ್ಮೂಲ ವ್ಯಕ್ತಿಗಳಾಗಿ ಮಂಜುನಾಥ್, ಪ್ರಮೋದ್, ಶ್ರೀನಿವಾಸ್ ಮುಂತಾದವರಿದ್ದರು. ಶಿಬಿರ ಇಂದಿನಿಂದ ಮೇ5ರವರೆಗೆ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ 9900281481, 9591843498ನ್ನು ಸಂಪರ್ಕಿಸಬಹುದು.
Comments
Post a Comment