ಮಾಂಸ ಮಾರಾಟ ನಿಷೇಧ : ಚಾರುಲತಾ ಸೋಮಲ್
ಶಿವಮೊಗ್ಗ : ಶಿವಮೊಗ್ಗ ಮಹಾನಗರಪಾಲಿಕೆಯು ಏ. 13 ಶ್ರೀರಾಮ ನವಮಿ, ಏ. 14 ಡಾ|| ಅಂಬೇಡ್ಕರ್ ಜಯಂತಿ ಮತ್ತು ಏ. 17 ರಂದು ನಡೆಯಲಿರುವ ಮಹಾವೀರ ಜಯಂತಿಯ ಅಂಗವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನಿಗಧಿತ ದಿನಾಂಕಗಳಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಮಹಾನಗರಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾಂಸ ಮಾರಾಟದ ಮಾಲೀಕರು ನಿಗಧಿತ ದಿನಾಂಕಗಳಂದು ತಮ್ಮ ಉದ್ದಿಮೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಆದೇಶವನ್ನು ಉಲ್ಲಂಘಿಸಿ, ಮಾಂಸ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment