**ಶಿವಮೊಗ್ಗದಲ್ಲಿ ಈ ದಿನ 427 ರೌಡಿ ಆಸಾಮಿಗಳನ್ನು ಕರೆಸಿ ಸಭೆ ನಡೆಸಿದ ಪೊಲೀಸ್ ಇಲಾಖೆ**

 

ಶಿವಮೊಗ್ಗ: ಜಿಲ್ಲೆಯಲ್ಲಿ ರೌಡಿ ಶೀಟರ್ ಪಟ್ಟಿಯಿಂದ ಒಟ್ಟು 1423 ಜನರನ್ನು ತೆಗೆದು ಹಾಕಲಾಗಿದೆ.ಹಲವಾರು ವರ್ಷಗಳಿಂದ. ರೌಡಿಪಟ್ಟಿಯಲ್ಲಿದ್ದು ಇದೀಗ ಯಾವುದೇ ರೌಡಿ ಚಟುವಟಿಕೆ ನಡೆಸದೇ ವೃತ್ತಿ ಯಲ್ಲಿ ತೊಡಗಿರುವವರನ್ನು ಗುರುತಿಸಿ ಠಾಣಾಧಿಕಾರಿಗಳಿಂದ ವರದಿ ಪಡೆದು ಪರಿಶೀಲಿಸಿ ನಂತರ ಜಿಲ್ಲಾ ರಕ್ಷಣಾಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ರೌಡಿ ಪಟ್ಟಿಯಿಂದ ಬಿಡುಗಡೆಯಾದವರ ಸಭೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್ ಅವರ ನೇತೃತ್ವದಲ್ಲಿ ನಗರದ ಡಿ.ಎ.ಆರ್ ಗ್ರೌಂಡ್ ನಲ್ಲಿ‌ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಈ ಹಿಂದೆ ರೌಡಿ ಹಾಳೆಗಳನ್ನು ತೆರೆದು ಅವರುಗಳ ಮೇಲೆ ಪೊಲೀಸ್ ಇಲಾಖೆಯಿಂದ ಸೂಕ್ತ ನಿಗಾವಹಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದ್ದು, ದಿನಾಂಕಃ-05-02-2022 ರಂದು ಶಿವಮೊಗ್ಗ ಉಪ ವಿಭಾಗದಲ್ಲಿ ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರ ನೇತೃತ್ವದಲ್ಲಿ ಹಾಗೂ ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗಗಳಲ್ಲಿ ಸಂಬಂಧಪಟ್ಟ ಪೊಲೀಸ್‌ ಉಪಾಧೀಕ್ಷಕರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ ಸುಧಾರಣೆಗೊಂಡಿರುವ ನಿಶ್ಚಲ ಕಡತವುಳ್ಳ ರೌಡಿ ಹಾಳೆ ಆಸಾಮಿಗಳನ್ನು ಕರೆಸಿ ಸಭೆ ನಡೆಸಿ ಸದರಿಯವರ ಗುಣನಡೆತೆಯ ಆಧಾರದ ಮೇಲೆ ಅವರುಗಳ ಮೇಲೆ ಈ ಹಿಂದೆ ತೆರೆಯಲಾದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಈ ಬಗ್ಗೆ ಅವರುಗಳಿಗೆ ತಿಳುವಳಿಕೆ ನೀಡಿ, ಇನ್ನು ಮುಂದೆಯೂ ಕೂಡ ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಉತ್ತಮ ಗುಣನಡೆತೆಯನ್ನು ಮುಂದುವರೆಸಿಕೊಂಡು ಹೋಗಲು ಹಾಗೂ ಜವಾಬ್ದಾರಿಯುತ ಪ್ರಜೆಯಾಗಿ ಜೀವನೆ ನಡೆಸಿ ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1423 ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಹಾಲೀ 1378 ರೌಡಿ ಹಾಳೆಗಳು ಚಾಲ್ತಿಯಲ್ಲಿರುತ್ತವೆ ಇದರಲ್ಲಿ ಈ ದಿನ 427 ರೌಡಿ ಆಸಾಮಿಗಳನ್ನು ಕರೆಸಿ ಸಭೆ ನಡೆಸಿ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ.







Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ