ಶಿವಮೊಗ್ಗ: ನಗರದಲ್ಲಿ ಅಮೃತ್ ಯೋಜನೆಯಡಿ ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಮಿಳ್ಳಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಎಂ.ಎಸ್.ಕೊಳವೆ ಮಾರ್ಗ ಅಳವಡಿಸಿದ್ದು, ಆರ್.ಎಂ.-7 ಕೊಳವೆ ಮಾರ್ಗಕ್ಕೆ ಲಿಂಕ್ ಮಾಡಿ ಚಾಲನೆಗೊಳಿಸುವುದರಿಂದ ಮಾರ್ಚ್ 19 ಮತ್ತು 20 ರಂದು ಪೊಲೀಸ್ ಕ್ವಾಟ್ರಸ್, ಟಿಪ್ಪುನಗರ, ತುಂಗಾನಗರ, ಜಿಲ್ಲಾ ಪಂಚಾಯತ್ ಕಚೇರಿ ಎದುರು, ಶಿವಮೂರ್ತಿ ಸರ್ಕಲ್, ಬಸವನಗುಡಿ, ರವೀಂದ್ರನಗರ, ಡಿ.ಸಿ.ಕಾಂಪೌಂಡ್, ಶೇಷಾದ್ರಿಪುರಂ ಟ್ಯಾಂಕ್ಗಳಿಂದ ದೈನಂದಿನ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Comments
Post a Comment