ಬಾಲಕಾರ್ಮಿಕಳನ್ನು ರಕ್ಷಸಿದ ಕಾರ್ಮಿಕ ಇಲಾಖೆ
ಶಿವಮೊಗ್ಗ: ಮಕ್ಕಳ ಸಹಾಯವಾಣಿ ದೂರಿನ ಮೇರೆಗೆ ಮಾರ್ಚ್ 17 ರಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಬಾಪೂಜಿ ನಗರದ ಮಹಮ್ಮದ್ ಜಕ್ರಿಯ ಎಂಬುವವರ ಮನೆಯಲ್ಲಿ 14 ವರ್ಷದ ಕು|| ಸಾಧಿಯ ಎಂಬ ಬಾಲಕಿಯನ್ನು ಸುಮಾರು 5 ತಿಂಗಳಿಂದ ಮನೆ ಕೆಲಸಕ್ಕೆ ನೇಮಿಸಿಕೊಂಡಿರುವುದನ್ನು ಪತ್ತೆಹಚ್ಚಿ, ರಕ್ಷಣೆ ಮಾಡಲಾಗಿದೆ. ಹಾಗೂ ಆಕೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಬಾಲಕಿಯ ಪೋಷಣೆ ಮತ್ತು ರಕ್ಷಣೆಗಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಯಿತು.
ಮಾಲೀಕರಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಕುರಿತು ಅರಿವು ಮೂಡಿಸಿ, ಮಾಲೀಕರ ವಿರುದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಯಿತು
ಈ ರಕ್ಷಣಾ ತಂಡದಲ್ಲಿ ಎಂ.ಪಿ ವಿಶ್ವನಾಥ ಕಾರ್ಮಿಕ ಅಧಿಕಾರಿಗಳು, ಪಿ ಭೀಮೆಶ್, ಕಾರ್ಮಿಕ ನಿರೀಕ್ಷಕರು 2ನೇ ವೃತ್ತ, ಶಿವಮೊಗ್ಗ, ರಘುನಾಥ ಎ,ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನೆ ಶಿವಮೊಗ್ಗ, ಪುನಿತ್ ಕುಮಾರ್ ಇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹೆಚ್ ರಾಜೇಶ್, ಸಿ.ಆರ್.ಪಿ, ಸಾರ್ವಜನಿಕ ಶಿಕ್ಷಣಾ ಇಲಾಖೆ ಅಶೋಕ್ ಕೆ.ಬಿ, ಆಪ್ತ ಸಮಾಲೋಚಕರು, ಮಕ್ಕಳ ಸಹಾಯ ವಾಣಿ, ತಿಮ್ಮೇಶಪ್ಪ, ಹೆಡ್ ಕಾನ್ಸ್‍ಸ್ಟೇಬಲ್, ಕೋಟೆ ಪೋಲೀಸ್ ಠಾಣೆ, ಶಿವಮೊಗ್ಗ ಇವರುಗಳು ಭಾಗವಹಿಸಿದ್ದರು ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments
Post a Comment