Posts

Showing posts from March, 2020

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

Image
ಶಿವಮೊಗ್ಗ: ನಗರದಲ್ಲಿ ಅಮೃತ್ ಯೋಜನೆಯಡಿ ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಮಿಳ್ಳಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಎಂ.ಎಸ್.ಕೊಳವೆ ಮಾರ್ಗ ಅಳವಡಿಸಿದ್ದು, ಆರ್.ಎಂ.-7 ಕೊಳವೆ ಮಾರ್ಗಕ್ಕೆ ಲಿಂಕ್ ಮಾಡಿ ಚಾಲನೆಗೊಳಿಸುವುದರಿಂದ ಮಾರ್ಚ್ 19 ಮತ್ತು 20 ರಂದು ಪೊಲೀಸ್ ಕ್ವಾಟ್ರಸ್, ಟಿಪ್ಪುನಗರ, ತುಂಗಾನಗರ, ಜಿಲ್ಲಾ ಪಂಚಾಯತ್ ಕಚೇರಿ ಎದುರು, ಶಿವಮೂರ್ತಿ ಸರ್ಕಲ್, ಬಸವನಗುಡಿ, ರವೀಂದ್ರನಗರ, ಡಿ.ಸಿ.ಕಾಂಪೌಂಡ್, ಶೇಷಾದ್ರಿಪುರಂ ಟ್ಯಾಂಕ್‍ಗಳಿಂದ ದೈನಂದಿನ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕರೋನಾ ವೈರಸ್ ಬಗ್ಗೆ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜಾಗೃತ ಕಾರ್ಯಕ್ರಮ: ಜೆಸಿಐ

Image
ಶಿವಮೊಗ್ಗ : ಜೆಸಿಐ ಶಿವಮೊಗ್ಗ ಶರಾವತಿ ಘಟಕದ ವತಿಯಿಂದ ಎಂ‌ಅರ್.ಎಸ್ ವೃತ್ತದ ಬಳಿ ಇರುವ ಅಲೆಮಾರಿ ಕ್ಯಾಂಪ್ ನಲ್ಲಿ "ಕರೋನಾ ವೈರಸ್" ಕುರಿತಾಗಿ ಆರೋಗ್ಯ ಜಾಗೃತಿ ಮೂಡಿಸಲಾಯಿತು, ಅಲ್ಲಿನ ನಿವಾಸಿಗಳಿಗೆ, ಮಕ್ಕಳಿಗೆ, ಕರೋನಾ ವೈರಸ್ ಮೂಲ ಹಾಗೂ ಹರಡುವಿಕೆಯಿಂದ ಹೇಗೆ ತಡೆಗಟ್ಟಬಹುದು ಎಂದು ಮುನ್ನೆಚ್ಚರಿಕೆಯ ಮಾಹಿತಿಯನ್ನು ಘಟಕದ ಉಪಾಧ್ಯಕ್ಷರಾದ ಜೆಸಿ.ಮೋಹನ್ ಕಲ್ಪತರು ಅವರು ತಿಳಿಸಿಕೊಟ್ಟರು, ಅಲ್ಲದೆ ಈ ವೈರಸ್ ನಿಂದ ಯಾರು ಆತಂಕ ಪಡುವ ಅಗತ್ಯವಿಲ್ಲ‌ ಈಗಾಗಲೇ ಜಿಲ್ಲಾಡಳಿತ ಪ್ರತ್ಯೇಕ ಚಿಕಿತ್ಸಾ ಕೊಠಡಿ ಯನ್ನು, ತೆರೆದು ಅಗತ್ಯ ತುರ್ತು ಕ್ರಮ‌ ಕೈಗೊಂಡಿದೆ ಈ ಬಗ್ಗೆ ಯಾವ ಆತಂಕ ಬೇಡ, ಆದರೆ ಈ ವೈರಸ್ ಸೋಂಕುಗಳನ್ನು ತಡೆಗಟ್ಟಲು ನಾವುಗಳು ಜಾಗೃತೆಯಿಂದ ಇರಬೇಕು ಅಲ್ಲದೆ ಪ್ರಾಥಮಿಕ ತಿಳುವಳಿಕೆಗಳು ಇರಬೇಕು, ಆಗಾಗ್ಗೆ ಕೈ ತೊಳೆದುಕೊಳ್ಳುವುದು, ಶೀತ.ನೆಗಡಿ.ಕೆಮ್ಮು ಗಳಿದ್ದರೆ ಸ್ವತಃ ಚಿಕಿತ್ಸೆ ಕೈಗೊಳ್ಳದೆ ಹತ್ತಿರದ ವೈಧ್ಯರು ಅಥವಾ ಸ್ಥಳೀಯ ಮೆಗ್ಗಾನ್ ಆಸ್ಪತ್ರೆಯಲ್ಲಿ ತೆರೆಯಲಾಗಿರುವ " ಚಿಕಿತ್ಸಾ ಕೊಠಡಿಗೆ ಬೇಟಿ ನೀಡಬೇಕು ಎಂದು ಘಟಕದ ಅಧ್ಯಕ್ಷರಾದ ಗಾರಾ.ಶ್ರೀನಿವಾಸ್ ತಿಳಿಸಿದರು, ಮಾಸ್ಕ್ ಗಳನ್ನು ನೆಗಡಿ,ಕೆಮ್ಮು ಇದ್ದವರು ಹಾಕಿಕೊಳ್ಳಬೇಕು ಹಾಗೂ ಕೈ ತೊಳೆದುಕೊಳ್ಳುವಿಕೆಯನ್ನು ಹೇಗೆ ನಾವು ಮಾಡಬೇಕಿದೆ ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜೆಸಿ.ಯಾಹ್ಯ ಎಂ.ಡಿ ಜೆಸಿ.ಶೋಭಾ ಸತೀಶ್ ಹಾಗೂ ಸಹಕಾರ್ಯದರ್ಶಿ, ಜೆಸಿ.ಪರಮೇಶ್ಚರ...

ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ: ಸಮಾಜ ಕಲ್ಯಾಣ ಇಲಾಖೆ

Image
ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ/ ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾ ಗಾಂಧಿ/ ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2019-20ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಪ.ಜಾ/ಪ.ವ/ಸಾಮಾನ್ಯ/ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ನಿಗಧಿತ ನಮೂನೆ ಅರ್ಜಿಗ ಳನ್ನು ಆಯಾ ತಾಲೂಕು ಆಯಾ ವಸತಿ ಶಾಲೆಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ:03.04.2020 ರೊಳಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ಆಯಾ ವಸತಿ ಶಾಲೆಗಳಲ್ಲಿ ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.   ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ದೂ.ಸಂ. 08182-249241 /ತಾಲೂಕು ಸಹಾಯಕ ನಿರ್ದೇಶಕರು, ಹಿಂ.ವ.ಕ.ಇಲಾಖೆಯ ತಾಲೂಕು ವಿಸ್ತರಣಾಧಿಕಾರಿಗಳು ಅಥವಾ ಆಯಾ ವಸತಿ ಶಾಲೆಗಳನ್ನು ಸಂಪರ್ಕಿಸುವುದು.

ಗ್ರಾಮಲೆಕ್ಕಿಗರ ಹುದ್ದೆಗಳ ದಾಖಲಾತಿ ಪರೀಕ್ಷೆ ದಿನಾಂಕ ಮುಂದೂಡಿಕೆ: ಜಿಲ್ಲಾಧಿಕಾರಿಗಳು

Image
ಶಿವಮೊಗ್ಗ: 2019-20ನೇ ಸಾಲಿನ ಶಿವಮೊಗ್ಗ ಜಿಲ್ಲಾ ಕಂದಾಯ ಘಟಕದ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ತಾತ್ಕಾಲಿಕ ಪಟ್ಟಿಯನ್ನು http://shivamogga.nic.in   ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ಮಾರ್ಚ್ 23 ರಂದು ನಿಗಧಿಪಡಿಸಿದ್ದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು  ಮುಂದಿನ ಆದೇಶದವರಿಗೆ ಮುಂದೂಡಲಾಗಿದೆ ಹಾಗೂ ಪರಿಷ್ಕøತ ದಿನಾಂಕವನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಬಾಲಕಾರ್ಮಿಕಳನ್ನು ರಕ್ಷಸಿದ ಕಾರ್ಮಿಕ ಇಲಾಖೆ

Image
ಶಿವಮೊಗ್ಗ: ಮಕ್ಕಳ ಸಹಾಯವಾಣಿ ದೂರಿನ ಮೇರೆಗೆ ಮಾರ್ಚ್ 17 ರಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಬಾಪೂಜಿ ನಗರದ ಮಹಮ್ಮದ್ ಜಕ್ರಿಯ ಎಂಬುವವರ ಮನೆಯಲ್ಲಿ 14 ವರ್ಷದ ಕು|| ಸಾಧಿಯ ಎಂಬ ಬಾಲಕಿಯನ್ನು ಸುಮಾರು 5 ತಿಂಗಳಿಂದ ಮನೆ ಕೆಲಸಕ್ಕೆ ನೇಮಿಸಿಕೊಂಡಿರುವುದನ್ನು ಪತ್ತೆಹಚ್ಚಿ, ರಕ್ಷಣೆ ಮಾಡಲಾಗಿದೆ.  ಹಾಗೂ ಆಕೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಬಾಲಕಿಯ ಪೋಷಣೆ ಮತ್ತು ರಕ್ಷಣೆಗಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಯಿತು. ಮಾಲೀಕರಿಗೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ಕುರಿತು ಅರಿವು ಮೂಡಿಸಿ, ಮಾಲೀಕರ ವಿರುದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಯಿತು ಈ ರಕ್ಷಣಾ ತಂಡದಲ್ಲಿ ಎಂ.ಪಿ ವಿಶ್ವನಾಥ ಕಾರ್ಮಿಕ ಅಧಿಕಾರಿಗಳು, ಪಿ ಭೀಮೆಶ್, ಕಾರ್ಮಿಕ ನಿರೀಕ್ಷಕರು 2ನೇ ವೃತ್ತ, ಶಿವಮೊಗ್ಗ, ರಘುನಾಥ ಎ,ಎಸ್ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನೆ ಶಿವಮೊಗ್ಗ, ಪುನಿತ್ ಕುಮಾರ್ ಇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,   ಹೆಚ್ ರಾಜೇಶ್, ಸಿ.ಆರ್.ಪಿ, ಸಾರ್ವಜನಿಕ ಶಿಕ್ಷಣಾ ಇಲಾಖೆ ಅಶೋಕ್ ಕೆ.ಬಿ, ಆಪ್...

ಕುವೆಂಪು ವಿವಿ 30ನೇ ಘಟಿಕೋತ್ಸವ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ : ಕುಲಸಚಿವರ ಪ್ರೊ|| ಎಸ್.ಎಸ್. ಪಾಟೀಲ್

Image
ಶಿವಮೊಗ್ಗ: ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ 30ನೇ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್ 28 ರಂದು ನಿಗಧಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ದೇಶದಲ್ಲಿ ಕೊರೋನಾ ಮಾರಾಣಾಂತಿಕ ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಭೆ, ಸಮಾರಂಭ ಇತ್ಯಾದಿಗಳನ್ನು ಮುಂದೂಡಲು ನವದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿಗಳು ಸೂಚಿಸಿರುವುದರಿಂದ ಘಟಿಕೋತ್ಸವವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಕುವೆಂಪು ವಿವಿಯ ಕುಲಸಚಿವರ ಪ್ರೊ|| ಎಸ್.ಎಸ್. ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಗಮವಾಗಿ ನಡೆಯಲು ಕ್ರಮ : ಕೆ.ಬಿ. ಶಿವಕುಮಾರ್

Image
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮಾರ್ಚ್ 27ರಿಂದ ಏಪ್ರಿಲ್ 09 ರವರೆಗೆ ಜಿಲ್ಲೆಯ 84 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಈ ಪರೀಕ್ಷೆಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.       ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ಪರೀಕ್ಷೆಗಳ ಮೇಲ್ವಿಚಾರಕರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂಧಿಗಳು ಕರ್ತವ್ಯದಲ್ಲಿ ಉದಾಸೀನ ಮಾಡುವುದು ಹಾಗೂ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗುವುದಿಲ್ಲ. ಪ್ರತಿ ಸಿಬ್ಬಂಧಿಯೂ ಅನಾವಶ್ಯಕವಾಗಿ ಕಾಲಹರಣ ಮಾಡದೆ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಅವರು ಪರೀಕ್ಷಾ ಮೇಲ್ವಿಚಾರಕರಿಗೆ ಸೂಚಿಸಿದರು.       ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಕೇಂದ್ರದಲ್ಲಿ ಪ್ರಾಥಮಿಕವಾಗಿ ಇರಬೇಕಾದ ಶೌಚಾಲಯ, ಕುಡಿಯುವ ನೀರು ಇರುವ ಬಗ್ಗೆ ಹಾಗೂ ಸಿಸಿ ಕ್ಯಾಮರಾ, ಗೋಡೆ ಗಡಿಯಾರ ಅಳವಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಕರ್ತವ್ಯದಲ್ಲಿ ಶಿಸ್ತು, ಸಂಯಮ ಕಾಪಾಡಿಕೊಳ್ಳಬೇಕು. ಅಧಿಕಾರಗಳ ನಡುವೆ ಸಮನ್ವಯತೆ ಅಗತ್ಯ ಎಂದವರು ನುಡಿದರು. ...