ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ : ಮೆಟ್ರಿಕ್ ನಂತರದ ಬಾಲಕ ಬಾಲಕೀಯರ ಸಾಮಾನ್ಯ, ಮಾದರಿ, ವೃತ್ತಿಪರ, ಸ್ನಾತಕೋತ್ತರ, ನರ್ಸಿಂಗ್, ಇಂಜಿನಿಯರಿಂಗ್ & ವೈದ್ಯಕೀಯ ವಿದ್ಯಾರ್ಥಿನಿಲಯಗಳ ಉಳಿಕೆ ಸ್ಥಾನಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. 
ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗ ಮತ್ತು ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳು ಇಲಾಖೆ ವೆಬ್‌ಸೈಟ್ www.backwardclasses.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ bcwd.hostels@karnataka.gov.in ಇ ಮೇಲ್ ಮೂಲಕ ಅಥವಾ ತಾಲ್ಲೂಕು/ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಪ್ರವರ್ಗ-1, ಎಸ್‌ಟಿ ಎಸ್‌ಸಿ ವಿದ್ಯಾರ್ಥಿಗಳ ಪಾಲಕರ ಆದಾಯ ಮಿತಿ 2.50 ಲಕ್ಷ ಹಾಗೂ ಇತರೆ ವರ್ಗಗಳ ಆದಾಯ ಮಿತಿ 1.00 ಲಕ್ಷಕ್ಕೆ ಸೀಮಿತವಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 12 ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-65970006ಕ್ಕೆ ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌

ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ